ಬೆಸುಗೆ -
ಲೋಹಗಳ ತಗಡು, ತಂತಿ ಮುಂತಾದವನ್ನು ಒಂದರೊಡನೊಂದು ಬೆಸೆಯಲು ಅಥವಾ ಬಂಧಿಸಲು ಉಪಯೋಗಿಸುವ ಮಿಶ್ರಲೋಹ ಬಂಧಕ (ಸಾಲ್ಡಂ). ಬೆಸುಗೆಗೆ ಬಳಸುವ ಮಿಶ್ರಲೋಹದ ದ್ರವನಬಿಂದು ನಿಮ್ನವಾಗಿದ್ದು ಬೆಸೆಯಲ್ಲಡುವ ಎರಡೂ ವಸ್ತುಗಳ ಮಧ್ಯೆ ತೆಳು ಪದರದ ರೂಪದಲ್ಲಿ ವ್ಯಾಪಿಸಿಕೊಳ್ಳುವುದು. ಸರ್ವೇ ಸಾಮಾನ್ಯ ಉಪಯೋಗಿಸುವ ಬೆಸುಗೆಯ ಮಿಶ್ರ ಲೋಹಗಳಲ್ಲಿ ಸೀಸ ಮತ್ತು ತವರಗಳ ಪ್ರಮಾಣಗಳು ಪ್ರತಿಶತ 50 ರಷ್ಟಿರುತ್ತವೆ. ಸೀಸಗಳ ತಗಡು ಮತ್ತು ಕೊಳವೆ ಬೆಸೆಯಲು ವಿಶೇಷವಾಗಿ ಉಪಯೋಗಿಸುವ ಬೆಸುಗೆಯ ಮಿಶ್ರಲೋಹದಲ್ಲಿ ಶೇಕಡಾ 60ರಷ್ಟು ಸೀಸ ಮತ್ತು ಶೇಕಡಾ 40ರಷ್ಟು ತವರ ಇರುತ್ತವೆ. ಬೆಸುಗೆ ಕಿಲಸಕ್ಕೆ ಉಪಯೋಗಿಸಲಾಗುವ ಮಿಶ್ರಲೋಹಕ್ಕೆ ಹೆಚ್ಚು ವ್ಯಾಪ್ತಿಯ ದ್ರವನಬಿಂದು ಇರಬೇಕು. ಶೇಕಡಾ 40ರಷ್ಟು ಸೀಸ ಮತ್ತು ಶೇಕಡಾ 60ರಷ್ಟು ತವರವಿರುವ ಬೆಸುಗೆ ಮಿಶ್ರಲೋಹದ ದ್ರವನಬಿಂದು ಸೀಸವಿರುವ ಬೆಸುಗೆ ಮಿಶ್ರಲೋಹದ್ದಕ್ಕಿಂತ ಕಡಿಮೆ. ಇದರ ವ್ಯಾಪ್ತಿಯೂ ಕಡಿಮೆ. ಆದ್ದರಿಂದ ಇದನ್ನು ಹೆಚ್ಚಾಗಿ ಸೀಸ ಮತ್ತಿತರ ನಿಮ್ನ ದ್ರನ ಬಿಂದುಗಳಿರುವ ಮಿಶ್ರಲೋಹಗಳನ್ನು ಬೆಸೆಯಲು ಉಪಯೋಗಿಸುವರು. ಬೆಸುಗೆ ಮಿಶ್ರಲೋಹದ ದ್ರವನ ಬಿಂದುವನ್ನು ಮತ್ತುಷ್ಟು ಕಡಿಮೆಮಾಡಲು ಬಿಸ್ಮತ್ ಲೋಹವನ್ನು ಸೇರಿಸುವರು. ಹೆಚ್ಚಾಗಿ ಬಳಕೆಯಲ್ಲಿರುವ ಕೆಲವು ಬೆಸುಗೆ ಮಿಶ್ರ ಲೋಹಗಳಲ್ಲಿಯ ಲೋಹ ಪ್ರಮಾಣಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ಕೊಟ್ಟಿದೆ: 

ಬೆಸುಗೆ ಮಿಶ್ರಲೋಹದ ಹೆಸರು    ಸೀಸ (Pb)   ತವರ (Sಟಿ)   ಬಿಸ್ಮತ್ (ಃi)
          			    %          %          %
 	      
ಮೆದು ಬೆಸುಗೆ ಮಿಶ್ರಲೋಹ          50         50      ---
ವೈಪಿಗ್ ಬೆಸುಗೆ ಮಿಶ್ರಲೋಹ         60         40      ---
ಫೈನ್ ಬೆಸುಗೆ ಮಿಶ್ರಲೋಹ          40         60      ---
ವುಡ್‍ನ ಲೋಹ                 25         12.5     50
ಬೆಸುಗೆ ಮಿಶ್ರಲೋಹ            95-97,5      ---      ---
	
ಬೆಸುಗೆ ಮಾಡಬೇಕಾದ ಲೋಹದ ತಗಡುಗಳು ಅಥವಾ ತಂತಿ ಮುಂತಾದವುಗಳ ಮೇಲ್ಮೈಯನ್ನು ಅದರಲ್ಲೂ ಬೆಸುಗೆ ಮಾಡಬೇಕಾದ ಸ್ಥಳವನ್ನು ಚೆನ್ನಾಗಿ ಶುದ್ಧಗೊಳಿಸಿ ಯಾಂತ್ರಿಕವಾಗಿ ಉಜ್ಜಿ ಅಥವಾ ಘರ್ಷಕ ಗುಣವುಳ್ಳ ಮರಳು ಕಾಗದದಿಂದ ಉಜ್ಜಿ ಶುದ್ಧಗೊಳಿಸಬೇಕು. ಲೋಹಗಳ ಮೇಲ್ಮೈ ಮೇಲೆ ಶೇಖರವಾಗಿರುವ ಲೋಹ ಆಕ್ಸೈಡುಗಳನ್ನು ಸ್ರಾವಕ ವಸ್ತು ಉಪಯೋಗಿಸಿ ತೊಡೆದು ಹಾಕಬಹುದು. ಬೆಸುಗೆ ಮಿಶ್ರಲೋಹವನ್ನು ದ್ರಮೀಕರಿಸಲು ಮತ್ತು ಬೆಸೆಯ ಬೇಕಾದ ಲೋಹಗಳ ಭಾಗಗಳನ್ನು ಕಾಸಲು ಬೇಕಾಗುವ ಶಾಖ ಪಡೆಯಲು ಬೆಸೆಯುವ ಕಬ್ಬಿಣ ಉಪಯೋಗಿಸುವುದು ರೂಢಿ. ಈ ಉಪಕರಣದ ತುದಿಯಲ್ಲಿ ತಾಮ್ರದ ಅಗ್ರಭಾಗವಿದ್ದು ಇದರ ಆಕಾರ ಉಪಯೋಗಕ್ಕೆ ತಕ್ಕಂತೆ ಇರುವುದು. ಇದನ್ನು ಅನಿಲ ಜ್ವಾಲೆಯಿಂದಾಗಲಿ ವಿದ್ಯುತ್ತು ಹರಿಸಿ ಆಗಲಿ ಸತತವಾಗಿ ಕಾದಿರುವಂತೆ ಮಾಡಬಹುದು. ತರುವಾಯ ಬೆಸುಗೆ ಮಿಶ್ರಲೋಹವನ್ನು ಬೆಸೆಯಬೇಕಾದ ಜಾಗದಲ್ಲಿಟ್ಟು ಅದು ದ್ರವೀಕರಿಸಿ ಎರಡೂ ಲೋಹಗಳು ಬೆಸುಗೆಗೊಂಡ ಬಳಿಕ, ಹೆಚ್ಚು ಬೆಸುಗೆ ಮಿಶ್ರಲೋಹದ ಭಾಗವನ್ನು ಒರೆಸಿ ತೆಗೆದುಬಿಡುವರು. ವಿದ್ಯುತ್ತಿನಿಂದ ಕಾಸಿ ಬೆಸುಗೆ ಮಾಡಲು ಉಪಯೋಗಿಸುವ ಬೆಸುಗೆ ತುಪಾಕಿ (ಸಾಲ್ಡರಿಂಗ್ ಗನ್) ಕೂಡ ಸಾಕಷ್ಟು ಬಳಕೆಯಲ್ಲಿದೆ. ಬೆಸುಗೆ ಮಿಶ್ರಲೋಹವನ್ನು ಟೊಳ್ಳಾದ ತಂತಿ ರೂಪದಲ್ಲಿ ತಯಾರಿಸಿ ಮಾರಾಟ ಮಾಡುವುದುಂಟು. ಹೀಗೆ ಬೆಸುಗೆ ಮಿಶ್ರಲೋಹ ಉಪಯೋಗಿಸಿ ಮಾಡಿದ ಬೆಸುಗೆಯನ್ನು ಗಡಸು ಬೆಸುಗೆ ಮತ್ತು ಶಾಖ ಬೆಸುಗೆ ಜೊತೆ ಹೋಲಿಸಿದಾಗ ಮೆದುವಾಗಿರುವುದು ಮತ್ತು ಬೆಸುಗೆ ಮಾಡಲಾದ ಭಾಗ ಕಡಿಮೆ ಸಾಮಥ್ರ್ಯ ವುಳ್ಳದ್ದಾಗಿರುವುದು. 	
									
(ಎಂ.ಎಂಎ.)
ಪರಿಷ್ಕರಣೆ:
ಎಂ. ಜಿ. ಶ್ರೀನಿವಾಸನ್
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ